English Website

- ಚಿತ್ರಗಳು - 1  2  3  4  5 -

ಗುಲ್ಬರ್ಗ ಸಾಹಿತ್ಯ ಸಮ್ಮೇಳನದಲ್ಲಿ ಮಹಾರಾಜ ಕಾಲೇಜು ಕರ್ಣಾಟಕ ಸಂಘದವರು ನನ್ನ (ಕುವೆಂಪು) “ಯಮನ ಸೋಲು” ನಾಟಕವನ್ನು ಆಡುವುದೆಂದು ಗೊತ್ತಾಗಿತ್ತು. ಆಗ ಬೇಸಿಗೆಯ ರಜದ ಕಾಲವಾದ್ದರಿಂದ ವಿದ್ಯಾರ್ಥಿಗಳು ಅವರವರ ಊರಿಗೆ ಹೋಗಿದ್ದರು; ಆದ್ದರಿಂದ ನಾಟಕದಲ್ಲಿ ಪಾತ್ರವಹಿಸುವವರು ಈ ಸಮ್ಮೇಲನಕ್ಕೆ ಮೊದಲೆ ಗುಲ್ಬರ್ಗಕ್ಕೆ ತಾವು ತಾವೆ ಬಿಡಿಬಿಡಿಯಾಗಿ ಹೋಗುವುದೆಂದು ಗೊತ್ತಾಗಿತ್ತು. ಆದರೆ ಸತ್ಯವಾನನ ಪಾತ್ರಧಾರಿ ಕಾಯಿಲೆ ಬಿದ್ದುದರಿಂದ ತಾನು ಬರುವ ಸ್ಥಿತಿಯಲ್ಲಿಲ್ಲ ಎಂದು ಕೊನೆಯ ಗಳಿಗೆಯಲ್ಲಿ ತಿಳಿಸಿಬಿಟ್ಟನಂತೆ. ಮತ್ತೊಬ್ಬನನ್ನು ಆ ಪಾತ್ರ ವಹಿಸುವಂತೆ ಮಾಡಿ, ಅವನಿಗೆ ಅಭ್ಯಾಸ ಕೊಡುವಷ್ಟು ಸಮಯವೂ ಇರಲಿಲ್ಲ. ಆದ್ದರಿಂದ ವೆಂಕಣ್ಣಯ್ಯನವರು ತಂತಿಕೊಟ್ಟರು, ಕುಪ್ಪಳಿಯ ಮಲೆಗಳಲ್ಲಿ ಅಲೆಯುತ್ತಿದ್ದ ನನಗೆ, ಪರಿಸ್ಥಿತಿಯ ವಿಷಮತೆಯನ್ನರಿತು ನಾನೂ, ಶಿವಮೊಗ್ಗದ ಮಿತ್ರರೊಡನೆ, ಗುಲ್ಬರ್ಗಕ್ಕೆ ಧಾವಿಸಿದೆ.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -