English Website

- ನೆನಪು - ಕನ್ನಡದಲ್ಲಿ ಏನಿದೆ? -

[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]


ಎಸ್. ಅನಂತರಂಗಾಚಾರ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ   ಕನ್ನಡ ಭಾರತಿ ’ಮತ್ತು ಪ್ರೊ.ಎಸ್.ವಿ.ರಂಗಣ್ಣನವರ ‘ಪಾಶ್ಚಾತ್ಯ ಗಂಭೀರ ನಾಟಕಗಳು’ ಪುಸ್ತಕಗಳ ಬಿಡುಗಡೆ ಸಮಾರಂಭ. ಕನ್ನಡ ಭಾರತಿ’ ರಾಯಲ್ ಸೈಜಿನ ಸುಮಾರು ಎರಡು ಸಾವಿರ ಪುಟಗಳ ದೊಡ್ಡ ಗ್ರಂಥ. ಅಂತೆಯೇ ರಂಗಣ್ಣನವರ ಪುಸ್ತಕವೂ ಗಾತ್ರದಲ್ಲಿ, ವಿಷಯದಲ್ಲಿ ದೊಡ್ಡ ಗ್ರಂಥವೆ. ಈ ಪುಸ್ತಕಗಳನ್ನು ಬಿಡುಗಡೆ ಮಾಡಲು ಬಂದಿದ್ದವರು ಕುವೆಂಪು ಅವರು. ಪುಸ್ತಕಗಳ ಬಿಡುಗಡೆಯನ್ನು ಮಾಡುತ್ತಾ ಮಾತನಾಡಿದ ಕುವೆಂಪು ಅವರು ಕನ್ನಡದಲ್ಲಿ ಏನಿದೆ ? ಎಂದು ಪ್ರಶ್ನಿಸುವವರ ತಲೆಯ ಮೇಲೆ ಈ ಗ್ರಂಥಗಳಿಂದ ಮೊಟಕಿದರೆ ಕನ್ನಡದಲ್ಲಿ ಏನಿದೆ ಎಂದು ಗೊತ್ತಾಗುತ್ತದೆ ಎಂದರಂತೆ.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -