English Website

- ನೆನಪು - ಶ್ರೀ ರಾಮಾಯಣ ದರ್ಶನಂ ಮತ್ತು ಬೂಟ್ಸ್ -

[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]


ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಆಗ ತಾನೆ ಪ್ರಕಟವಾಗಿತ್ತಂತೆ. ಅದರ ಬೆಲೆ ಹದಿಮೂರು ರೂಪಾಯಿಗಳು. ಕುವೆಂಪು ಅವರನ್ನು ನೋಡಲು ಬಂದ ಗಣ್ಯರೊಬ್ಬರು ಆ ಮಾತು ಈ ಮಾತು ಮಾತನಾಡುತ್ತಾ ಶ್ರೀ ರಾಮಾಯಣ ದರ್ಶನಂ ಬೆಲೆ ಜಾಸ್ತಿಯಾಗಲಿಲ್ಲವೆ ಎಂದರು. ಆಗ ಕುವೆಂಪು ನೀವು ತೊಟ್ಟಿರುವ ಬೂಟ್ಸ್ನ ಬೆಲೆ ಎಷ್ಟು ಎಂದು ಕೇಳಿದರಂತೆ. ಅದಕ್ಕವರು ೧೮ ರೂಪಾಯಿ ಎಂದರಂತೆ. ನೀವು ತೊಟ್ಟ ಬೂಟ್ಸಿಗಿಂತ ರಾಮಾಯಣ ದರ್ಶನಂ ಐದು ರೂಪಾಯಿ ಕಡಿಮೆ ಅಲ್ಲವೆ, ನಿಮ್ಮ ಬೂಟ್ಸ್ಗಿಂತ ಶ್ರೀ ರಾಮಾಯಣ ದರ್ಶನಂ ಮೌಲ್ಯ ಕಡಿಮೆಯಾಯಿತೆ ಎಂದು ಪ್ರಶ್ನಿಸಿದರಂತೆ.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -