English Website

- ನೆನಪು - ಶಿಕ್ಷಣ ಮಾಧ್ಯಮ -

[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]


ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು; ಶಿಕ್ಷಣದಲ್ಲಿ ಎಲ್ಲ ಘಟ್ಟಗಳಲ್ಲಿಯೂ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು. ಕನ್ನಡ ಪಠ್ಯಪುಸ್ತಕಗಳು ಅದಕ್ಕೆ ಸಿದ್ಧವಾಗಿ ಕನ್ನಡ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಸಹಾಯಕವಾಗಬೇಕೆಂದು. ಸಂಕಲ್ಪಿಸಿ, ಕಾರ್ಯಗತಗೊಳಿಸಲು ಮೈಸೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿದರಂತೆ. ಸದಸ್ಯರಲ್ಲಿ ಬಹುಪಾಲು ವಿಜ್ಞಾನ ಮೊದಲಾದ ಶಾಸ್ತ್ರಗಳ ಅಧ್ಯಾಪಕರೇ ಇದ್ದ ಸಭೆಯಲ್ಲಿ ವಿಜ್ಞಾನದಂಥ ವಿಷಯಗಳನ್ನು ಕನ್ನಡದಲ್ಲಿ ಬೋಧಿಸಲು ಸಾಧ್ಯವೇ ಎಂದು ಕುಹಕನಗೆ, ಉದ್ಗಾರಗಳನ್ನು ತೆಗೆದರಂತೆ. ಆಗ ಕುವೆಂಪು ಅವರು ಭರತ ಖಂಡಕ್ಕೆ ಸ್ವಾತಂತ್ರ್ಯ ಬಂದು ಆರೇಳು ವರ್ಷಗಳಾದರೂ ದಾಸ್ಯಬುದ್ಧಿ ತೊಲಗಿಲ್ಲ; ಮಾನವಮಾನಗಳ ಭೇದವೇ ನಮ್ಮವರಿಗೆ ತಿಳಿದಿಲ್ಲ. ಅಭಿಮಾನ್ಯ ಶೂನ್ಯರಿಗೆ ಮಾನವೆಲ್ಲಿಯದು? ನಾಲ್ಕಾರು ವರ್ಷಗಳ ಕಾಲ ಗೂಟಕ್ಕೆ ಬಿಗಿಸಿಕೊಂಡು ಅಲ್ಲಿಯೇ ಹಾಕಿದ ಎಂಜಲು ಮೂಳೆಗಳನ್ನು ತಿಂದು, ಅಷ್ಟರಿಂದಲೇ ಮೈ ಬೆಳೆಸಿಕೊಂಡ ನಾಯಿಯು ಸರಪಳಿಯನ್ನು ಕಡಿದು, ಒದ್ದರೂ ಅದು ಸ್ವಾತಂತ್ರ್ಯದ ಬೆಲೆಯರಿಯದೆ, ಗೂಟದ ಸುತ್ತ ತಾರಾಡುತ್ತದೆ. ಆಂಗ್ಲರ ಸುಪುತ್ರರಾದ ನಮ್ಮ ಜನ ತಮ್ಮ ಭಾಷೆಯ ಮೌಲ್ಯವನ್ನರಿಯದೆ ಆತ್ಮ ಗೌರವದ ಮಹಿಮೆಯನ್ನರಿಯದೆ ಇನ್ನೂ ಕತ್ತಲಲ್ಲಿ ಮುಗ್ಗರಿಸುತ್ತಿದೆ ಎಂದು ಉತ್ತರಿಸಿದರಂತೆ. ದುರಂತವೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಐವತ್ತು ವರ್ಷಗಳ ಅನಂತರವೂ ಅದೇ ಸ್ಥಿತಿಯಲ್ಲಿ ಮುಂದುವರೆಯುತ್ತಿರುವುದು.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -