English Website

- ಜೀವನ ಚರಿತ್ರೆ - ೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 

[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಕುವೆಂಪು ಅವರ ಮರಣದ ಅನಂತರ ಕುಪ್ಪಳಿ ಮನೆ ಮತ್ತು ಸುತ್ತಣ ಪರಿಸರ(ಕವಿಶೈಲ)ವನ್ನು ಕರ್ನಾಟಕ ಸರಕಾರ ರಾಷ್ಟ್ರೀಯ ಸ್ಮಾರಕವಾಗಿ ಕಾಯ್ದಿರಿಸಿದೆ. ಹಾಗೂ ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನ್ನು ರಚಿಸಿದೆ. ಸಾಹಿತ್ಯ, ಸಂಶೋಧನೆ, ಪರಿಸರ ಕಾಳಜಿಗಳ ಬಗೆಗೆ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತಲೆಎತ್ತಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕುಪ್ಪಳಿಯಲ್ಲಿ ೨೦೦೨-೨೦೦೩ನೇ ಸಾಲಿನಿಂದ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯವು ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಕುಪ್ಪಳಿಯಲ್ಲಿ ಸ್ಥಾಪಿಸಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ಸಂಶೋಧನೆ ಅಧ್ಯಯನಗಳಿಗೆ ಅನುವು ಮಾಡಿಕೊಟ್ಟಿದೆ. ಪಿ.ಎಚ್.ಡಿ. ಅಧ್ಯಯನ ಮಾಡಬಯಸುವವರು ರಾಜ್ಯದ, ರಾಷ್ಟ್ರದ ಯಾವುದೇ ಭಾಗಗಳಿಂದ ನೋಂದಣಿ ಮಾಡಿಕೊಂಡು ಸಂಶೋಧನೆ ಮಾಡಲು ಅವಕಾಶ ಕಲ್ಪಿಸಿದೆ. ಪ್ರಥಮ ಬಾರಿಗೆ ಕನ್ನಡದಲ್ಲಿ ಒಬ್ಬ ಕವಿಯ ಕೃತಿಗಳ ಅಧ್ಯಯನಕ್ಕೆಂದೇ ಕುವೆಂಪು ಅಧ್ಯಯನ ಡಿಪ್ಲೋಮಾ ಕೋರ್ಸ್ನ್ನು ತೆರೆದಿದೆ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಈ ಕೋರ್ಸ್ನ್ನು ಮಾಡಬಹುದಾಗಿದೆ. ಕನ್ನಡ ಸಾಹಿತ್ಯ-ಸಂಸ್ಕೃತಿಗಳಲ್ಲಿ ಆಸಕ್ತಿಯಿರುವವರೆಲ್ಲರಿಗೂ ಇದೊಂದು ಸದವಕಾಶ.

ಕವಿಮನೆಯನ್ನು ನೋಡಲೆಂದು ವರ್ಷಕ್ಕೆ ಸರಾಸರಿ ೩೫ ರಿಂದ ೪೦ ಸಾವಿರ ಜನರು ಸಂದರ್ಶಿಸುತ್ತಿದ್ದಾರೆ. ಇಂಥ ಸಂದರ್ಶಕರಿಗೆ ಅನುಕೂಲವಾಗಲೆಂದು 'ಶತಮಾನೋತ್ಸವ ಭವನ'ವನ್ನು ಕಟ್ಟುತ್ತಿದ್ದಾರೆ. ಈ ಭವನದಲ್ಲಿ ಉತ್ತಮ ಗ್ರಂಥಾಲಯ ವ್ಯವಸ್ಥೆ, ಕವಿಯ ಜೀವನ ಚಿತ್ರ, ಕೃತಿಗಳನ್ನು ಆಧರಿಸಿದ ನಾಟಕ, ಸಿನಿಮಾ, ಕಿರುಚಿತ್ರಗಳನ್ನು ಮಕ್ಕಳಿಗಾಗಿ ತೋರಿಸಲೆಂದು ವೀಡಿಯೋ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ಬೆಂಗಳೂರಿನಿಂದ ಹೋಗುವವರಿಗೆ ಅನುಕೂಲವಾಗಲೆಂದು 'ರಾಜಹಂಸ' ಸುಖಾಸೀನ ಬಸ್ಸಿನ ವ್ಯವಸ್ಥೆಯನ್ನು ಮಾಡಿದ್ದಾರೆ.

ಕುಪ್ಪಳಿಯಲ್ಲಿ ಪ್ರತಿವರ್ಷ ನಡೆಯುವ ವಿಚಾರ ಸಂಕಿರಣ, ವಿಚಾರ ಕಮ್ಮಟಗಳು, ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕರ್ನಾಟಕದ ಎಲ್ಲಾ ಕಡೆಗಳಿಂದ ತುಂಬು ಉತ್ಸಾಹದಿಂದ ಭಾಗವಹಿಸಿ ಕ್ರಿಯಾಶೀಲವಾಗಿರುವುದನ್ನು ಗಮನಿಸಿದರೆ ಕವಿಮನೆಯ ಪರಿಸರ ಕವಿಯ ಆಶಯದಂತೆ ಒಂದು ಸಾಂಸ್ಕೃತಿಕ ಕಲಾ ಕೇಂದ್ರವಾಗಿ ವಿಕಾಸಗೊಳ್ಳುತ್ತಿದೆ. ಇಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ.

ಶ್ರೀ ಕಡಿದಾಳ್ ಪ್ರಕಾಶ
[ಕಾರ್ಯದರ್ಶಿ]
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ, ದೇವಂಗಿ ಪೋಸ್ಟ್, ತೀರ್ಥಹಳ್ಳಿ ತಾಲ್ಲೂಕು
ಶಿವಮೊಗ್ಗ ಜಿಲ್ಲೆ - 577 415
ಪೋನ್ : 08265-230166

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -